New Ration Card : ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಆರಂಭ!

New Ration Card : ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಆರಂಭ!

(New Ration Card) ಸರಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಚೀಟಿ ನೀಡುತ್ತಿದ್ದು, ಇದೀಗ ಮತ್ತೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಆಹಾರ ಇಲಾಖೆ ಅವಕಾಶ ಕಲ್ಪಿಸಿದೆ.

ಪಡಿತರ ಚೀಟಿದಾರರಿಗೆ ಸರ್ಕಾರ ನೀಡುವ ವೈದ್ಯಕೀಯ ಸೇವೆಗಳು ಸೇರಿದಂತೆ ವಿವಿಧ ಯೋಜನೆಗಳ ಲಾಭವನ್ನು ನೀವು ಪಡೆಯಬಹುದು. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳೇನು? ಮತ್ತು ವಿದ್ಯಾರ್ಹತೆ ಹೇಗಿರಬೇಕು ಎಂಬ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಗಮನಿಸಿ: ಹೊಸ ಪಡಿತರ ಚೀಟಿಯು ವೈದ್ಯಕೀಯ ತುರ್ತುಸ್ಥಿತಿ ಹೊಂದಿರುವವರಿಗೆ ಲಭ್ಯವಿದೆ ಮತ್ತು ಅದನ್ನು ಪಡೆಯಬಹುದು.

New Ration Card, bpl ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅರ್ಹತೆ:

• ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
• ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು.
• ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ, BPL ಮತ್ತು APL ಆಧಾರದ ಮೇಲೆ ಪಡಿತರ ಚೀಟಿಯನ್ನು ನಿರ್ಧರಿಸಲಾಗುತ್ತದೆ.

Ration ಅಗತ್ಯ ದಾಖಲೆಗಳು:

• ಆಧಾರ್ ಕಾರ್ಡ್
• ಮತದಾರರ ID
• ಮೊಬೈಲ್ ಸಂಖ್ಯೆ
• ಚಾಲನಾ ಪರವಾನಗಿ
• ವಯಸ್ಸಿನ ಪ್ರಮಾಣಪತ್ರ
• ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
• ಅರ್ಜಿದಾರರ ಸ್ವಯಂ ಘೋಷಿತ ಅಫಿಡವಿಟ್

Ration ಅರ್ಜಿ ಸಲ್ಲಿಸುವುದು ಹೇಗೆ?

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರ ಅಥವಾ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸಮಯ ನಿಗದಿಯಾಗಿದ್ದು, ಆ ವೇಳೆಗೆ ಭೇಟಿ ನೀಡಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.

Leave a Comment